WHO WE ARE

ABOUT KUIDFC

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (KUIDFC) ಕಂಪೆನಿ ಆಕ್ಟ್, 1956 ರ ಅಡಿಯಲ್ಲಿ ಸಾರ್ವಜನಿಕ ನಿಯಮಿತ ಕಂಪೆನಿಯಾಗಿ ದಿನಾಂಕ 02.11.1993 ರಂದು ಸಂಘಟಿಸಲಾಯಿತು. ನಗರ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ತಯಾರಿಸಲು, ರಾಜ್ಯ ಮತ್ತು ತಾಂತ್ರಿಕ, ಆರ್ಥಿಕ, ಸಲಹಾ ಮತ್ತು ಅಭಿವೃದ್ಧಿಗಾಗಿ ನಗರ ಸಂಸ್ಥೆಗಳಿಗೆ ನೆರವು ಒದಗಿಸುವುದು, ಯೋಜನೆಗಳ ಮಾಸ್ಟರ್ ಪ್ಲಾನ್ ತಯಾರಿಕೆ ಹಾಗೂ ಯೋಜನೆಗಳ ಅನುಷ್ಠಾನ , ಇತ್ಯಾದಿಗಳು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಯೋಜನಾ ಸೂತ್ರೀಕರಣ, ಮೌಲ್ಯಮಾಪನ, ನಿರ್ವಹಣೆ ಮತ್ತು ಅನುಷ್ಠಾನದಲ್ಲಿ ಪರಿಣತಿಯನ್ನು ಪರಿಗಣಿಸಿ KUIDFC ಅನ್ನು ರಾಜ್ಯದ ವಿವಿಧ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯದ ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. KUIDFC ಯು ಭಾರತ ಸರ್ಕಾರದಿಂದ ರಾಜ್ಯ ಮಟ್ಟದ ಹಣಕಾಸು ಸಂಸ್ಥೆ (ಎಸ್ಎಲ್ಎಫ್ಐ) ಯ ಸ್ಥಾನಮಾನವನ್ನು ಪಡೆದುಕೊಂಡಿದೆ.

ನಗರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳು / ಸಂಸ್ಥೆಗಳಿಗೆ ನಿರ್ದೇಶನ ನೀಡುವ ನಿರ್ದೇಶಕರು ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ನಿರ್ದೇಶಕರ ಮಂಡಳಿಯ ನಿಯಂತ್ರಣದ ಅಡಿಯಲ್ಲಿ ನುರಿತ ವೃತ್ತಿಪರ ಅಧಿಕಾರಿಗಳು ಹಾಗೂ ರಾಜ್ಯ ಕೇಡರ್ನಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ತಂಡದಿಂದ ಸಂಸ್ಥೆಯು ನಡೆಯಲ್ಪಡುತ್ತಿದೆ.

ಯೋಜನಾ ಫಂಡಿಗ್ / ಏಜನ್ಸಿಗಳು

  • ಭಾರತ ಸರಕಾರ
  • ಕರ್ನಾಟಕ ಸರಕಾರ
  • ವಿಶ್ವ ಬ್ಯಾಂಕ್ / ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್
  • ರಾಷ್ಟ್ರೀಕೃತ ಬ್ಯಂಕ್
  • ಇತರೆ ಹಣಕಾಸು ಸಂಘಸಂಸ್ಥೆಗಳು / ಹಣಕಾಸು ಮಾರುಕಟ್ಟೆ

Main objectives

  • ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ನಗರ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಅನುಷ್ಟಾನಗೊಳಿಸುವುದು. ಯೋಜನೆ ಮತ್ತು ಕಾರ್ಯಕ್ರಮಗಳನ್ನು ನಿರೂಪಿಸುವುದು. ಭೂ ಅಭಿವೃದ್ಧಿ, ನೈರ್ಮಲ್ಯತೆ, ರಸ್ತೆಗಳ ನಿರ್ವಹಣೆ, ಸಂಚಾರ ವ್ಯವಸ್ಥೆ ಮತ್ತು ಇವುಗಳಿಗೆ ಸಂಬಂಧಪಟ್ಟ ವಿಷಯಗಳ ನಿರ್ವಹಣೆ ಅದರ ನಿರ್ಧಿಷ್ಟ ಕ್ಷೇತ್ರಗಳಾಗಿರುತ್ತವೆ.
  • ನಗರ ಸ್ಥಳೀಯ ಸಂಸ್ಥೆಗಳಿಗೆ ಸಮಗ್ರಯೋಜನೆಗಳ (ಮಾಸ್ಟರ್ ಪ್ಲಾನ್ಸ್) ಅನುಷ್ಟಾನ ಇತರೆ ಅಭಿವೃದ್ಧಿ ಯೋಜನೆಗಳು ಸೇರಿದಂತೆ ತಾಂತ್ರಿಕ ಮತ್ತು ಇತರೆ ನೆರವು
  • ಸ್ಥಳೀಯ ಆಡಳಿತ ಸಂಸ್ಥೆಗಳಾದ ಮಹಾನಗರ ಪಾಲಿಕೆಗಳು ಮತ್ತು ನಗರ ಸಭೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಕರ್ನಾಟಕ ಸರ್ಕಾರ ಕಾಲಾನುಕಾಲಕ್ಕೆ ಮಾನ್ಯತೆ ನೀಡುವ ಮತ್ತಿತರ ಸ್ಥಳೀಯ ಸಂಸ್ಥೆಗಳು ಹಾಗೂ ಮಂಡಳಿಗಳಿಗೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಅನುಕೂಲವಾಗುವಂತೆ ಸಾಲ ಮತ್ತು ಮುಂಗಡದ ರೂಪದಲ್ಲಿ ಆರ್ಥಿಕ ಸಹಾಯ ನೀಡುವುದು.
  • ಸ್ಥಳೀಯ ಆಡಳಿತ ಸಂಸ್ಥೆಗಳು, ಮಂಡಳಿಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತಿತರ ಸಂಸ್ಥೆಗಳಿಗೆ ತಾಂತ್ರಿಕ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಆಂತರಿಕ ಸಾಮಥ್ರ್ಯ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಅಭಿವೃದ್ಧಪಡಿಸಿಕೊಳ್ಳಲು ಅನುವಾಗುವಂತೆ ಅಗತ್ಯ ಸಲಹೆ ಹಾಗೂ ಸಹಕಾರ ನೀಡುವುದು.

ಉಸ್ತುವಾರಿ ಸಂಸ್ಥೆ:

ಕೆ.ಯು.ಐ.ಡಿ.ಎಫ್.ಸಿ.ಯನ್ನು ರಾಜ್ಯದ ನಗರ ಮೂಲಸೌಕರ್ಯ ಯೋಜನೆಗಳು / ಕಾರ್ಯಕ್ರಮಗಳು ಹಾಗೂ ಬಾಹ್ಯ ನೆರವಿನ ಯೋಜನೆಗಳ (ಇ.ಎ.ಪಿ) ಅನುಷ್ಟಾನಗೊಳಿಸಲು ನೋಡಲ್ ಸಂಸ್ಥೆಯಾಗಿ ನೇಮಿಸಲಾಗಿದ್ದು, ಕೇಂದ್ರ ಸರ್ಕಾರದ ಯೋಜನೆಗಳಾದ ಜೆ.ಎನ್.ಎನ್.ಯು.ಆರ್.ಎಂ., ಯು.ಐ.ಡಿ.ಎಸ್.ಎಸ್.ಎಂ.ಟಿ., ಸ್ಮಾರ್ಟ್ ಸಿಟಿ ಅಭಿಯಾನ ಮತ್ತಿತರೆÀ ಯೋಜನೆಗಳು / ಕಾರ್ಯಕ್ರಮಗಳ ಅನುಷ್ಟಾನದಲ್ಲಿ ರಾಜ್ಯ ಮಟ್ಟದ ನೋಡಲ್ ಸಂಸ್ಥೆಯಾಗಿಯೂ ಸಹ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ ಭಾರತ ಸರ್ಕಾರದಿಂದ ರಾಜ್ಯ ಮಟ್ಟದ ಹಣಕಾಸು ಸಂಸ್ಥೆಯ ಸ್ಥಾನಮಾನವನ್ನು ಸಹ ಪಡೆದುಕೊಂಡಿದೆ.

Financial Intermediary

ಕೆ.ಯು.ಐ.ಡಿ.ಎಫ್.ಸಿ.ಯು ರಾಜ್ಯ ಮತ್ತು ಕೇಂದ್ರ ಸರ್ಕಾರ, ವಿಶ್ವ ಬ್ಯಾಂಕ್, ಏಷಿಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಹಣಕಾಸಿನ ನೆರವನ್ನು ಪಡೆದು ನಗರ ಸ್ಥಳೀಯ ಸಂಸ್ಥೆಗಳಾದ ನಗರ ಸಭೆಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಇತರೆ ಸಂಸ್ಥೆಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನರವನ್ನು ಒದಗಿಸುವುದರ ಜೊತೆಗೆ ನಗರ ಮೂಲ ಸೌಕರ್ಯ ಯೋಜನೆಗಳನ್ನು ಕೈಗೊಳ್ಳುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಲ ಮತ್ತು ಅನುದಾನದ ರೂಪದಲ್ಲಿ ನೆÀರವನ್ನು ನೀಡುವಲ್ಲಿ ಹಣಕಾಸು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ.

ರಾಜ್ಯ ಮಟ್ಟದ ಹಣಕಾಸು ಸಂಸ್ಥೆಯಾಗಿ ನಗರ ಮೂಲಸೌಕರ್ಯ ಹಣಕಾಸು ಮಾರುಕಟ್ಟೆಯ ಅಭಿವೃದ್ಧಿಗೆ ಒತ್ತುನೀಡಲು ನಿರ್ವಾಹಕ ಮತ್ತು ಸಂಯೋಜನೆಯ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆ ನೀಡಲು ಪ್ರಸ್ತಾಪಿಸಲಾಗಿದೆ. ಈ ಉದ್ದೇಶದ ಸಾಧನೆಯ ಮಾರ್ಗದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಾಮಥ್ರ್ಯಾಭಿವೃದ್ಧಿ ಮತ್ತು ಗುರುತಿಸುವಿಕೆ ಹಾಗೂ ಹಣಕಾಸು ಹೂಡುವ ಯೋಜನೆಗಳ ಅಭಿವೃದ್ಧಿಗೆ ಪ್ರಾರಂಭದಲ್ಲಿ ಆದ್ಯತೆ ನೀಡಲು ಯೋಜಿಸಲಾಗಿದೆ. ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವÀ ಯು.ಎಸ್.ಎ. ಮಾದರಿಯ ಕ್ರೋಢೀಕೃತ ಹಣಕಾಸು ಅಭಿವೃದ್ಧಿ ಸೌಲಭ್ಯ {ಪೂಲ್ಡ್ ಫೈನಾನ್ಸ್ ಡೆವಲಪ್‍ಮೆಂಟ್ ಫೆಸಿಲಿಟಿ (ಪಿ.ಎಫ್.ಡಿ.ಎಫ್)} ಯೋಜನೆಯ ಅನುಷ್ಟಾನಕ್ಕೆ ಕೆ.ಯು.ಐ.ಡಿ.ಎಫ್.ಸಿ.ಯನ್ನು ರಾಜ್ಯ ಮಟ್ಟದ ನೋಡಲ್ ಸಂಸ್ಥೆಯಾಗಿ ನೇಮಿಸಲಾಗಿದೆ.

ಕೆ.ಯು.ಐ.ಡಿ.ಎಫ್.ಸಿ.ಯು ತನ್ನದೇ ಆದ ಪ್ರಮುಖ ಗುಣಲಕ್ಷಣಗಳನ್ನು ಹೊಂದಿದ್ದು.್ಲ ಪರಿಣಿತಿ ಹೊಂದಿರುವ ಕ್ಷೇತ್ರಗಳಾದ : ಯೋಜನಾ ತಯಾರಿ, ನಿರ್ವಹಣೆ, ಅನುಷ್ಟಾನ ಮತ್ತು ಕಾರ್ಯಕ್ಷಮತೆ. ಮೂಲಸೌಕರ್ಯ ಸಂಬಂಧಿತ ಹಣಕಾಸು ಪೂರೈಕೆ ನಿಯಮಗಳನ್ನು ಬಾಹ್ಯ ನೆರವಿನ ಸಂಸ್ಥೆಗಳು ಅನುಸರಿಸುತ್ತಿರುವುದು.

Management and control

ಈ ಸಂಸ್ಥೆಯನ್ನು ಹಿರಿಯ ಭಾ.ಆ.ಸೇ ಅಧಿಕಾರಿಯವರು ವ್ಯವಸ್ಥಾಪಕ ನಿರ್ದೇಶಕರಾಗಿ ನಿರ್ವಹಿಸುತ್ತಿದ್ದು ಇವರಿಗೆ ನೆರವು ನೀಡಲು ಹಿರಿಯ ಅಧಿಕಾರಿಗಳ ತಂಡದೊಂದಿಗೆ ಒಟ್ಟಾರೆ ನಿಯತ್ರಣ ಮತ್ತು ಪರಿವೀಕ್ಷಣೆಯನ್ನು ಮಂಡಳಿ ನಿರ್ದೇಶಕರು ಮಾಡುತ್ತಾರೆ.

ಈ ಸಂಸ್ಥೆಯು ಅಧಿಕೃತ ಬಂಡವಾಳ ರೂ. 10,00,00,000/- ಆಗಿದ್ದು, ರೂ. 100 ಮುಖಬೆಲೆಯ 10,00,000 ಷೇರುಗಳನ್ನಾಗಿ ವಿಂಗಡಿಸಲಾಗಿದೆ. ಸಂಸ್ಥೆಯ ಬಂಡವಾಳ ಹೂಡಿಕೆ ರೂ. 8,06,48,800/- ಆಗಿರುತ್ತದೆ. ಬಂಡವಾಳದ ಒಟ್ಟಾರೆ ಷೇರುಗಳನ್ನು ಕರ್ನಾಟಕ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ಹೊಂದಿರುತ್ತದೆ.

ಕ್ರಮ ಸಂಖ್ಯೆ
ಷೇರುದಾರರು
ಷೇರುಗಳ ಸಂಖ್ಯೆ
1
ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಸರ್ಕಾರ. 606476
2
ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು 200001
3
ಅಪರ ಮುಖ್ಯ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು 1
4
ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು 1
5
ಪ್ರಧಾನ ಕಾರ್ಯದರ್ಶಿಗಳು, ಹಣಕಾಸು ಇಲಾಖೆ, 2ನೇ ಮಹಡಿ, ವಿಧಾನ ಸೌಧ, ಬೆಂಗಳೂರು 1
6
ಪ್ರಧಾನ ಕಾರ್ಯದರ್ಶಿಗಳು, ವಸತಿ ಇಲಾಖೆ, ವಿಕಾಸ ಸೌಧ, ಬೆಂಗಳೂರು 1
7
ಕಾರ್ಯದರ್ಶಿಗಳು, ಪೌರಾಡಳಿತ, ನಗರಾಭಿವೃದ್ಧಿ ಇಲಾಖೆ, 4ನೇ ಮಹಡಿ, ವಿಕಾಸ ಸೌಧ, ಬೆಂಗಳೂರು 1
8
ಕಾರ್ಯದರ್ಶಿಗಳು (ವೆಚ್ಚ), ಹಣಕಾಸು ಇಲಾಖೆ, ಕರ್ನಾಟಕ ಸರ್ಕಾರ 1
9
ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 1
10
ಮಹಾನಗರ ಆಯುಕ್ತರು, ಬಿ.ಎಂ.ಆರ್.ಡಿ.ಎ, ಎಲ್.ಆರ್.ಇ.ಡಿ ಕಟ್ಟಡ, ಆಲಿ ಆಸ್ಕರ್ ರಸ್ತೆ, ಬೆಂಗಳೂರು 1
11
ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು 1
12
ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 1
13
ಉಪ ನಿರ್ದೇಶಕರು, ನಗರ ಯೋಜನೆ, ಬಿ.ಎಂ.ಆರ್.ಡಿ.ಎ, ಎಲ್.ಆರ್.ಇ.ಡಿ ಕಟ್ಟಡ, ಆಲಿ ಆಸ್ಕರ್ ರಸ್ತೆ, ಬೆಂಗಳೂರು 1

Projects or Schemes

The following are the projects implemented by KUIDFC:

External Aided Projects (EAPs)

ಮುಕ್ತಾಯಗೊಂಡ ಯೋಜನೆಗಳು
  • ಎಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ - ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಕೆ.ಯು.ಐ.ಡಿ.ಪಿ)
  • ಎಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ - ಕರ್ನಾಟಕ ನಗರ ಅಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆ (ಕೆ.ಯು.ಡಿ.ಸಿ.ಇ.ಎಂ.ಪಿ)
  • ವಿಶ್ವ ಬ್ಯಾಂಕ್ ನೆರವಿನ - ಕರ್ನಾಟಕ ನಗರ ನೀರು ವಲಯ ಹೂಡಿಕೆ ಯೋಜನೆ (ಕೆ.ಯು.ಡಬ್ಲ್ಯೂ.ಎಸ್.ಐ.ಪಿ)
ಚಾಲ್ತಿಯಲ್ಲಿರುವ ಯೋಜನೆಗಳು
  • ವಿಶ್ವ ಬ್ಯಾಂಕ್ ನೆರವಿನ - ಕರ್ನಾಟಕ ಪೌರ ಸುಧಾರಣಾ ಯೋಜನೆ (ಕೆ.ಎಂ.ಆರ್.ಪಿ)
  • ಎಷಿಯನ್ ಅಭಿವೃದ್ಧಿ ಬ್ಯಾಂಕ್ ನೆರನಿನ - ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಯೋಜನೆ – ಜಲಸಿರಿ (ಕೆ.ಐ.ಯು.ಡಬ್ಲ್ಯೂ.ಎಂ.ಐ.ಪಿ)
  • ಎಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ - ಉತ್ತರ ಕರ್ನಾಟಕ ನಗರ ವಲಯ ಹೂಡಿಕೆ ಕಾರ್ಯಕ್ರಮ (ಎನ್.ಕೆ.ಯು.ಎಸ್.ಐ.ಪಿ)
  • ವಿಶ್ವ ಬ್ಯಾಂಕ್ ನೆರವಿನ - ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆ.ಯು.ಡಬ್ಲ್ಯೂ.ಎಸ್.ಎಂ.ಪಿ)
  • ಕರ್ನಾಟಕ ಸರ್ಕಾರದ ನೆರವಿನ - 9 ಪಟ್ಟಣಗಳ ಕುಡಿಯುವ ನೀರಿನ ಯೋಜನೆ.

ಇತರೆ ಯೋಜನೆಗಳು

  • ಭಾರತ ಸರ್ಕಾರ ಪ್ರಾಯೋಜಿತ - ಮೆಗಾಸಿಟಿ ಯೋಜನೆ
  • ಭಾರತ ಸರ್ಕಾರ ಪ್ರಾಯೋಜಿತ - ಜವಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆ (ಜೆ.ಎನ್.ಎನ್.ಯು.ಆರ್.ಎಂ)
  • ಕರ್ನಾಟಕ ಸರ್ಕಾರ ಪ್ರಾಯೋಜಿತ - ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ (ಸಿ.ಎಂ.ಎಸ್.ಎಂ.ಟಿ.ಡಿ.ಪಿ)
  • ಘನ ತ್ಯಾಜ್ಯ ನಿರ್ವಹಣೆ - ಪ್ರತ್ಯೇಕವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬೆಂಗಳೂರು ನಗರ ಸುತ್ತಮುತ್ತಲ ಪ್ರದೇಶದಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ.
  • ಭಾರತ ಸರ್ಕಾರ ಪ್ರಯೋಜಿತ - ಸ್ಮಾರ್ಟ್ ಸಿಟಿ ಅಭಿಯಾನ (ಎಸ್.ಸಿ.ಎಂ)
  • ಪಾರಂಪಾರಿಕ ನಗರದ ಬೆಳವಣಿಗೆ ಮತ್ತು ಅಭಿವೃದ್ಧಿ ಯೋಜನೆ (ಹೃದಯ್)

ವಾರ್ಷಿಕ ವರದಿ

Annual Report 2015-2016Annual Report 2016-2017

ಸ್ಥಾಪನೆ

ಭಾರತದಲ್ಲಿ ಅತೀ ವೇಗವಾಗಿ ನಗರೀಕರಣದಲ್ಲಿ ನಮ್ಮ ರಾಜ್ಯವು ಒಂದಾಗಿದೆ. ಅದರ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗವು 18 ಮಿಲಿಯನ್ ನಾಗರೀಕರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ನಗರ ಪ್ರದೇಶಗಳ ಮೂಲಸೌಕರ್ಯದ ಅವಶ್ಯಕತೆಗಳನ್ನು ನಿರ್ಣಯಿಸಲು ಒಂದು ಸಂಸ್ಥೆ ಅಗತ್ಯವಿದೆ; ಯೋಜನೆಗಳನ್ನು ರೂಪಿಸಲು; ಸರ್ಕಾರದ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಉಸ್ತುವಾರಿ ಸಂಸ್ಥೆಯನ್ನಾಗಿ ಕಾರ್ಯನಿರ್ವಹಿಸಲು; ಹಣಕಾಸು ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸಲು. ಈ ಅವಶ್ಯಕತೆಗಳನ್ನು ಪೂರೈಸಲು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತವನ್ನು ಸ್ಥಾಪಿಸಲಾಯಿತು. ಸಂಸ್ಥೆಯು 1993ರ ನವೆಂಬರ್ ನಲ್ಲಿ ಕಂಪೆನಿಗಳ ಆಕ್ಟ್, 1956 ರ ಅಡಿಯಲ್ಲಿ ಸಾರ್ವಜನಿಕ ಸೀಮಿತ ಸಂಸ್ಥೆಯನ್ನಾಗಿ ನೋಂದಾಯಿಸಲಾಗಿದೆ. ಅಲ್ಲಿಂದೀಚೆಗೆ, ನಗರವು ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಅಂಗವಾಗಿ ಮತ್ತು ಬಾಹ್ಯ ನೆರವಿನ ಯೋಜನೆಗಳಿಗೆ ಏಜೆನ್ಸಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ನಿರ್ದೇಶಕ ಮಂಡಳಿ

ಶ್ರೀ ಯು.ಟಿ ಅಬ್ದುಲ್ ಖಾದರ್

ನಗರಾಭಿವೃದ್ಧಿ ಇಲಾಖೆ ಮತ್ತು ವಸತಿ ಸಚಿವರು
ಕರ್ನಾಟಕ ಸರ್ಕಾರ ಮತ್ತು ,ಅಧ್ಯಕ್ಷರು, ಕ.ನ.ಮೂ.ಸೌ.ಅ.ಹ.ನಿ.ನಿ.

ಶ್ರೀ ಮಹೇಂದ್ರ ಜೈನ್, ಭಾ.ಆ.ಸೇ

ಅಪರ ಮೂಖ್ಯ ಕಾರ್ಯದರ್ಶಿಗಳು,
ನಗರಾಭಿವೃದ್ಧಿ ಇಲಾಖೆ.

ಶ್ರೀ ಅಂಜೂಮ್ ಪರ್ವೇಜ್, ಭಾ.ಆ.ಸೇ.

ಕಾರ್ಯದರ್ಶಿಗಳು, ಪೌರಾಡಳಿತ ಮತ್ತು ನಗರಾಭಿವೃದ್ಧಿ,
ನಗರಾಭಿವೃದ್ಧಿ ಇಲಾಖೆ

ಡಾ: ಜೆ. ರವಿಶಂಕರ್, ಭಾ.ಆ.ಸೇ.

ಕಾರ್ಯದರ್ಶಿಗಳು (ವಸತಿ ಇಲಾಖೆ),
ಕರ್ನಾಟಕ ಸರ್ಕಾರ

ಶ್ರೀ ತುಷಾರ್ ಗಿರಿನಾಥ, ಭಾ.ಆ.ಸೇ.

ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಡಾ: ಏಕ್‍ರೂಪ್ ಕೌರ್, ಭಾ.ಆ.ಸೇ.

ಕಾರ್ಯದರ್ಶಿಗಳು (ವೆಚ್ಚ), ಹಣಕಾಸು ಇಲಾಖೆ, ಕರ್ನಾಟಕ ಸರ್ಕಾರ

ಶ್ರೀ ಶೇಖರಪ್ಪ ಬಿ.ಎಸ್., ಭಾ.ಆ.ಸೇ.

ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ

ಶ್ರೀ ಮೋಹನ್ ರಾಜ್, ಭಾ.ಆ.ಸೇ

ಮಹಾನಗರ ಆಯುಕ್ತರು,ಬಿ.ಎಂ.ಆರ್.ಡಿ.ಎ.

ಶ್ರೀ ಎ.ಬಿ. ಇಬ್ರಾಹಿಂ, ಭಾ.ಆ.ಸೇ

ವ್ಯವಸ್ಥಾಪಕ ನಿರ್ದೇಶಕರು
ಕ.ನ.ಮೂ.ಸೌ.ಅ.ಹ.ನಿ.ನಿ

ಶ್ರೀ ರಘುನಂದನ್ ಮೂರ್ತಿ, ಭಾ.ಆ.ಸೇ

ಜಂಟಿ ವ್ಯವಸ್ಥಾಪಕ ನಿರ್ದೇಶಕರು
ಕ.ನ.ಮೂ.ಸೌ.ಅ.ಹ.ನಿ.ನಿ

ಸಂಸ್ಥೆಯ ವಿನ್ಯಾಸ