ವಿಶ್ವ ಬ್ಯಾಂಕ್ ನೆರವಿನ “ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ”

ವಿಶ್ವ ಬ್ಯಾಂಕ್ ನೆರವಿನ “ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ”

>ವಿಶ್ವ ಬ್ಯಾಂಕ್ ನೆರವಿನ “ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ”

Project Objective

ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ

To provide city-wide access to continuous piped water supply in the cities of (i) Hubballi-Dharwad (ii) Belagavi and (iii) Kalaburagi in the state of Karnataka and to strengthen service delivery arrangements at the city level.

Project Scope

Each project city will enter into a twelve-year contract with a private operator. The performance-based contract comprises a one-year period for planning (start-up period),a three-year investment period to transition to continuous supply and to build a well-run utility convert intermittent supply and an eight-year period of ongoing service delivery with continuous supply (sustaining period). The ULB operates the system during the start-up period and private operator takes over operations from the beginning of the transition period.

Project Components

SL No. Components INR(in Crores)
1 Capital Investment Program 1679.00
2 Technical Assistance for Sector Development 30.00
3 Project Management 100.00

Project Funding Arrangement

ಕ್ರ. ಸಂ.. ಫಂಡಿಂಗ್ ಏಜೆನ್ಸಿ ಯುಎಸ್ ಡಾಲರ್ ಮಿಲಿಯನ್ ರೂ. ಕೋಟಿಗಳಲ್ಲಿ %
1 ವಿಶ್ವ ಬ್ಯಾಂಕ್ 187 1209 67
2 ರಾಜ್ಯದ ಪಾಲು 20 130 7
3 ಸ್ಥಳೀಯ ಸಂಸ್ಥೆಯ ಪಾಲು 72 470 26
4 ಒಟ್ಟು 279 1809 100

Project Implementation

KUIDFC, which manages a range of urban infrastructure development projects for the GoK, will manage project implementation on behalf of the project cities. It has established a PMU which will be responsible for the day-to-day project management, progress monitoring and reporting, procurement activities, and financial management.

KUIDFC has established PIU in each project city, which will oversee the day-to-day activities of the Project at the city level and will report to the PMU and to the ULB.

An Empowered Committee has been established to take decisions for implementing the projects

Current status:

  • Operator has been selected for design, implementation and management of 24x7 water supply to Hubballi-Dharwad twin cities. The project is in initial stage and the start up period activities viz Topographical survey ,customer survey and condition assessment of water supply assets are in progress. The Operator has submitted draft Service Improvement Plan and same is under review.
  • To create awareness about the project for all the stakeholders in the city, Support Organizations (NGO) have been selected, one for Hubballi and another for Dharwad , initial activities have been completed . Project staff have established rapport with different level officers, elected representatives and other stakeholders , presently staff are visiting households for distribution of pamphlets, is under progress.
  • Expert Reviewer and Technical Auditor have been appointed for expert review and Technical auditing of Project activities
  • Tendering is in process for selection the Operator for 24x7 water supply for the cities of Belagavi and Kalaburagi.

Progress

SL No Name of Town Project Package No Status Contract Value Financial Progress Cr Financial Progress % Physical Progress %
1 Hubbali-Dharwad Karnataka Urban Water Supply Modernization Project (KUWSMP) KUWSMP/24X7 WS/HDW/194 Services for Cost effective and Sustainable Up-Scaling of Continuous (24X7) Pressurized Water Supply and Operation,Maintenance and Management of the water Supply system. 252 -- -- Topography survey 100% and Customer survey 70%

Reforms

It is proposed to implement reforms based on “Urban Drinking Water and Sanitation Policy” of Government of Karnataka.

Reports

Frequently Asked Questions

ಹೌದು. ಕರ್ನಾಟಕ ನಗರ ನೀರು ವಲಯ ಸುಧಾರಣಾ (ಏUWಂSIP) ಯೋಜನೆಯಡಿ, 24x7 ನೀರು ಸರಬರಾಜನ್ನು ಐದು ಪ್ರಾತ್ಯಕ್ಷಿಕ ವಲಯಗಳಾದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ (ಉತ್ತರ), ಬೆಳಗಾವಿ (ದಕ್ಷಿಣ) ಮತ್ತು ಕಲ್ಬುರ್ಗಿ ನಗರಗಳಲ್ಲಿ ಸರಬರಾಜು ಮಾಡಲಾಗಿತ್ತು. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿಯೂ ಸಹ ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಸುಮಾರು 60,000 ಜನರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಹೌದು. ಸಗಟು ನೀರು ಸರಬರಾಜಿನ ಕೊಳವೆಗಳು, ಪಂಪಿಂಗ್ ಸ್ಟೇಷನ್‍ಗಳು, ನೀರಿನ ಶದ್ಧೀಕರಣ ಘಟಕಗಳು, ನೆಲಮಟ್ಟ ಮತ್ತು ಮೇಲ್ಮಟ್ಟದ ನೀರಿನ ಸಂಗ್ರಹಾಗಾರಗಳು, ವಿತರಣಾ ಜಾಲ, ಸ್ಕಾಡ, ಮನೆ ಸಂಪರ್ಕಗಳು ಮುಂತಾದವುಗಳನ್ನು ಪುನಃಶ್ಚೇತನಗೊಳಿಸುವ ಮೂಲಕ ನಿರಂತರ ನೀರು ಸರಬರಾಜನ್ನು ಸಾಧಿಸಬಹುದು. ಐದು ಆಯ್ದ ಪ್ರಾತ್ಯಕ್ಷಿಕ ವಲಯಗಳು ಮತ್ತು ಇಳಕಲ್ ಪಟ್ಟಣದಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ವಿಶ್ವದೆಲ್ಲೆಡೆ, ವಿತರಣಾ ಜಾಲವನ್ನು ಸತತವಾಗಿ ಒತ್ತಡದಲ್ಲಿರಿಸಿ ಮತ್ತು ನಿರಂತರವಾಗಿ ಶುದ್ಧ ನೀರನ್ನು ಸರಬರಾಜು ಮಾಡುವುದು ಉತ್ತಮ ವಿಧಾನವೆಂದು ಗುರುತಿಸಲಾಗಿದೆ. ನೀರನ್ನು ಆಗಾಗ್ಗೆ ಬಿಟ್ಟು ಬಿಟ್ಟು ಸರಬರಾಜು ಮಡುವ ಸಂದರ್ಭಗಳಲ್ಲಿ ವಿತರಣಾ ಕೊಳವೆಗಳು ಖಾಲಿಯಾದ ಸಂದರ್ಭಗಳಲ್ಲಿ ಕಲುಷಿತಗೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರೀಯ ಆರೋಗ್ಯ ಅಭಿಯಾಂತ್ರಿಕ ಮತ್ತು ಪರಿಸರ ಸಂಸ್ಥೆ (ಅPಊಇಇಔ) ಯು ಅಭಿಪ್ರಾಯಪಟ್ಟಿರುವುದರಿಂದ, ನಿರಂತರ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿರುವುದು ಸೂಕ್ತವೆನಿಸುತ್ತದೆ.
ಬಳಕೆದಾರರು ಮತ್ತು ನಗರ ಸ್ಥಳೀಯ ಸಂಸ್ಥೆಯ ದೃಷ್ಠಿಯಿಂದ ನಿರಂತರ ನೀರು ವಿತರಣೆಯ ಮೂಲಕ ನೀರಿನ ಸರಬರಾಜು ಆರ್ಥಿಕವಾಗಿ ಬಹಳ ಮಿತವ್ಯಯಕಾರಿ ವಿಧಾನವಾಗಿದೆ. ಮಹಾನಗರ ಪಾಲಿಕೆಯು ಇದೇ ಪ್ರಮಾಣದ ನೀರನ್ನು 24 ಗಂಟೆಗಳ ಬದಲಾಗಿ 4 ಗಂಟೆಗಳಲ್ಲಿ ಪಂಪ್ ಮಾಡಬೇಕಾದರೆ, ಇದಕ್ಕೆ ದೊಡ್ಡದಾದ ಪೈಪುಗಳ ಅವಶ್ಯಕವಿರುವ ಜೊತೆಗೆ, ಹೆಚ್ಚಿನ ಪಂಪಿಂಗ್ ಮತ್ತು ಸಂಗ್ರಹಣಾ ಸಾಮಥ್ರ್ಯದ ಅಗತ್ಯವಿರುತ್ತದೆ. ಇದರಿಂದ ಹೆಚ್ಚಿನ ಪಂಪಿಂಗ್ ಮಾಡುವುದರಿಂದ ವಿದ್ಯುತ್ ವೆಚ್ಚ ಹೆಚ್ಚಾಗಲಿದೆ. ಒಂದು ವೇಳೆ ನಿರಂತರ ನೀರು ಸರಬರಾಜು ಇಲ್ಲದಿದ್ದಲ್ಲಿ, ಬಳಕೆದಾರರು ತಮ್ಮದೇ ಆದ ಸಂಗ್ರಹಣಾ ವ್ಯವಸ್ಥೆಗಳಾದ ಟ್ಯಾಂಕ್ ಮತ್ತು ಸಂಪುಗಳ ನಿರ್ಮಾಣದ ಮೊರೆ ಹೋಗಬಹುದು. ಕೆಲವೊಂದು ಬಳಕೆದಾರರು, ಪರ್ಯಾಯ ವ್ಯವಸ್ಥೆಯಾದ ಕೊಳವೆ ಬಾವಿಗಳನ್ನು ಅಳವಡಿಸಿಕೊಳ್ಳಲಿರುವರು. ನೀರನ್ನು ಶೇಖರಿಸಿಡುವ ಬದಲು, ಎಲ್ಲಾ ಸಮಯದಲ್ಲೂ ತಮ್ಮ ‘ನಲ್ಲಿ’ಗಳಲ್ಲಿ ನೀರನ್ನು ಹೊಂದಿರುವುದು ಬಳಕೆದಾರರಿಗೆ ಒಂದು ರೀತಿಯ ಅನುಕೂಲವೇ ಸರಿ. ಬಳಕೆದಾರರು ಅನಿರೀಕ್ಷಿತ ನೀರಿನ ಸರಬರಾಜಿನಿಂದಾಗಿ ನೀರಿನ ಸಂಗ್ರಹಣೆಗಾಗಿ, ಗಂಟೆಗಟ್ಟಲೆ ಅನಾವಶ್ಯಕವಾಗಿ ಅನಿರ್ಧಿಷ್ಟಾವಧಿಯವರೆಗೆ ಕಾಯುವ ತೊಂದರೆ ಉದ್ಭವಿಸುವುದಿಲ್ಲ.
ಹೌದು. ನೀರಿನ ಸಂಗ್ರಹಣೆಯ ಸಾಮಥ್ರ್ಯ, ಪಂಪ್ ಮಾಡುವ ಅವಧಿ ಮತ್ತು ಶದ್ಧೀಕರಣ ಸೌಲಭ್ಯಗಳ ಸಾಮಥ್ರ್ಯವನ್ನು ಹೆಚ್ಚಿಸುವುದರಿಂದ, ಸಾಕಾಗುವಷ್ಟು ನೀರು ಲಭ್ಯವಾಗಿ ನಿರಂತರ ನೀರು ಸರಬರಾಜಿಗೆ ಹಾದಿ ಸುಗಮವಾಗಲಿದೆ.

ಖಾಸಗಿ ವಲಯವು ಈ ವ್ಯವಸ್ಥೆಯಲ್ಲಿ ಅಂತರಾಷ್ಟ್ರೀಯವಾಗಿ ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳು ಮತ್ತು ನಮ್ಮ ಪರಿಸ್ಥಿತಿಗೆ ಹೊಂದಿಕೆಯಾಗುವಂತಹ ನಿಪುಣತೆಯನ್ನು ಹೊಂದಿರುವುದರಿಂದ ಹಾಗೂ ಮೂಲಭೂತವಾಗಿ ಖಾಸಗಿ ವಲಯವನ್ನು ತೊಡಗಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ ಒಟ್ಟಾರೆ ಯೋಜನೆಯ ನಿಯಂತ್ರಣ ಮತ್ತು ನಿರ್ಮಾಣವಾಗಿರುವ ಆಸ್ತಿಗಳು ಮಹಾನಗರ ಪಾಲಿಕೆಯ ಒಡೆತನದಲ್ಲಿಯೇ ಇರುತ್ತವೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರವು, ನಗರ ಪ್ರದೇಶಗಳಲ್ಲಿ ನೀರು ಸರಬರಾಜಿನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಬೃಹತ್ ಮೊತ್ತದ ಹಣವನ್ನು ಖರ್ಚು ಮಾಡಲಾಗಿದ್ದರೂ, ಬಳಕೆದಾರರಿಗೆ ಸುಧಾರಿತ ನೀರು ಸರಬರಾಜು ಸೇವೆಯಾಗಿ ಇದು ಪರಿವರ್ತನೆಯಾಗುವಲ್ಲಿ ವಿಫಲವಾಗಿದೆ. ಆದುದರಿಂದ, ಯೋಜನೆಯನ್ನು ನಿರ್ವಹಿಸುವ ವ್ಯಕ್ತಿಯಿಂದಲೇ ನಿರ್ಮಾಣವಾಗಿರುವ ಆಸ್ತಿಗಳನ್ನು ಕೆಲವೊಂದು ಅವಧಿಯವರೆಗೆ ನಿರ್ವಹಿಸುವ ವಿನೂತನ ಪ್ರಯತ್ನವನ್ನು ಪ್ರಾತ್ಯಕ್ಷಿಕ ವಲಯದಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಆದುದರಿಂದ, ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರೇ ಕೆಲವೊಂದು ಅವಧಿಗೆ ವ್ಯವಸ್ಥೆಯನ್ನು ನಿರ್ವಹಿಸುವುದರಿಂದ, ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ.

ಹೌದು. ಆಪರೇಟರ್ ನೀರಿನ ಸಂಪರ್ಕ ಹೊಂದಿರುವ ಎಲ್ಲ ಆಸ್ತಿಗಳಿಗೂ ನಿರಂತರವಾಗಿ ನೀರು ಸರಬರಾಜು ಮಾಡಲು ಕರಾರಿನಲ್ಲಿ ನಿಗಧಿಪಡಿಸಿರುವ ಬಾಧ್ಯತೆಗಳನ್ವಯ ಜವಾಬ್ದಾರರಾಗಿರುತ್ತಾರೆ. ಆಪರೇಟರ್ ಕರಾರಿನಲ್ಲಿ ನಿಗಧಿಪಡಿಸಿರುವ ಕಾರ್ಯಕ್ಷಮತೆ ಗುರಿಯನ್ವಯ ನೀರು ಸರಬರಾಜಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಜೊತೆಗೆ, ಕನಿಷ್ಠ ಒತ್ತಡವನ್ನು ಸಹ ಕಾಯ್ದುಕೊಳ್ಳಬೇಕಾಗುತ್ತದೆ. ಕರಾರಿನಲ್ಲಿ ತಿಳಿಸಿರುವಂತೆ, ಆಪರೇಟರ್ ಕನಿಷ್ಠ ಮಟ್ಟದ ಒತ್ತಡವನ್ನು ಸಾಧಿಸಿದಲ್ಲಿ ಬೋನಸ್ ಪಡೆಯಲು ಸಹ ಅರ್ಹರಾಗಿದ್ದು, ವಿಫಲವಾದಲ್ಲಿ, ದಂಡವನ್ನು ಭರಿಸಬೇಕಾಗುತ್ತದೆ. ವಿತರಣಾ ವ್ಯವಸ್ಥೆಯಲ್ಲಿ ನೀರಿನ ಸೋರುವಿಕೆಯನ್ನು ಕಡಿಮೆ ಮಾಡುವುದರಿಂದ ಹೆಚ್ಚಿನ ನೀರು ಲಭ್ಯವಾಗಲಿದೆ. ಬಹಳ ಪ್ರಮುಖವಾಗಿ, ಖಾಸಗಿ ಸಂಸ್ಥೆಗಳು, ನಿರಂತರ ನೀರು ಸರಬರಾಜಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ನೈಪುಣ್ಯತೆಯನ್ನು ಹೊಂದಿರುವುದರಿಂದ, ಸೇವಾ ಮಟ್ಟದಲ್ಲಿ ಗಮನಾರ್ಹವಾದ ಸುಧಾರಣೆಯನ್ನು ನಿರೀಕ್ಷಿಸಬಹುದಾಗಿದೆ.
ಹೌದು. ಬಳಕೆದಾರರೊಂದಿಗೆ ನಡೆಯುವ ಪರಸ್ಪರ ಮುಖಾಮುಖಿ ಸಂವಾದಗಳ ಪ್ರಕ್ರಿಯೆಯ ಸುಧಾರಣೆ ಮತ್ತು ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳುವ ವಿಧಾನದ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಬಳಕೆದಾರರ ಕುಂದುಕೊರತೆಗಳನ್ನು ಸಕಾಲದಲ್ಲಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಅವಶ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು ಗ್ರಾಹಕರ ಕುಂದುಕೊರತೆಗಳಿಗೆ ಸಕಾಲದಲ್ಲಿ ಸ್ಪಂದಿಸುವ ಸಲುವಾಗಿ ಗ್ರಾಹಕರ ಸೇವಾ ಕೇಂದ್ರಗಳನ್ನು ವಿವಿಧ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು ಮತ್ತು ಬಳಕೆದಾರರ ದೂರುಗಳ ಸ್ಪಂದನೆಗೆ 24ಘಿ7 ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಬಳಕೆದಾರರ ದೂರುಗಳಿಗೆ ಆಪರೇಟರ್ ನಿಗದಿತ ಸಮಯದಲ್ಲಿ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಪ್ರಾತ್ಯಕ್ಷಿಕ ವಲಯದ ಗುತ್ತಿಗೆ ಕರಾರಿನಲ್ಲಿ ಆಪರೇಟರ್‍ಗೆ ವಿಧಿಸಲಾಗಿದೆ.
ನಿರಂತರ ನೀರು ಸರಬರಾಜು ಮಾಡುವುದರಿಂದ ನೀರಿನ ಬಳಕೆಯಲ್ಲಿ ಹೆಚ್ಚಳವಾಗುವುದಿಲ್ಲವೆಂಬ ಅಂಶ ಪ್ರಾತ್ಯಕ್ಷಿಕ ವಲಯದಲ್ಲಿ ಅನುಷ್ಠಾನಗೊಳಿಸಲಾಗಿರುವ ಯೋಜನೆಯಿಂದ ಕಂಡುಬಂದಿದೆ. ಆದರೆ, ವಾಸ್ತವವಾಗಿ, ಒಬ್ಬರಿಗೆ ದಿನಕ್ಕೆ 135 ಲೀಟರ್ ನೀರು ಅವಶ್ಯವೆಂದು ನಿಗದಿಪಡಿಸಲಾಗಿದ್ದರೂ ಅದಕ್ಕೆ ವ್ಯತಿರಿಕ್ತವಾಗಿ ದಿನಕ್ಕೆ ಪ್ರಾತ್ಯಕ್ಷಿಕ ವಲಯದಲ್ಲಿ ನೀರಿನ ಬಳಕೆಯು ದಿನಕ್ಕೆ ಸರಾಸರಿ 90-110 ಲೀಟರ್ ಎಂದು ಕಂಡುಬಂದಿದೆ. ನೀರಿನ ಮೀಟರ್ ಅಳವಡಿಸಿರುವ ನಿರಂತರ ನೀರು ಸರಬರಾಜು ಯೋಜನೆಯಿಂದ ನೀರಿನ ಪೋಲು ಮಾಡುವ ಬದಲು ಸಂರಕ್ಷಣೆಯ ಬಗ್ಗೆ ತಿಳುವಳಿಕೆಯ ಪ್ರಜ್ಞೆ ಬಳಕೆದಾರರಲ್ಲಿ ಮೂಡುತ್ತಿದೆ.
ನಗರದಲ್ಲಿರುವ ಬಡವರಿಗೆ ರಿಯಾಯ್ತಿಗಳನ್ನು ನೀಡಲಾಗುವುದು (ಕೊಳಚೆ ಪ್ರದೇಶ ಅಥವಾ ನಗರದ ಯಾವುದೇ ಭಾಗದಲ್ಲಿ 600 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣವುಳ್ಳ ಮನೆಗಳಲ್ಲಿ ವಾಸವಿರುವವರನ್ನು ನೀರು ಸರಬರಾಜಿಗಾಗಿ ಮಾತ್ರ ನಗರದ ಬಡವರೆಂದು ವ್ಯಾಖ್ಯಾನಿಸಲಾಗಿದೆ).
ನಗರದಲ್ಲಿರುವ ಸಾರ್ವಜನಿಕರ ‘ನಲ್ಲಿ’ಗಳನ್ನು ವೈಯಕ್ತಿಕ ಮನೆ ‘ನಲ್ಲಿ’ ಸಂಪರ್ಕಗಳನ್ನಾಗಿ ಪರಿವರ್ತಿಸಲು ಪ್ರಸ್ತಾಪಿಸಲಾಗಿದೆ. ವೈಯಕ್ತಿಕ ಮನೆ ‘ನಲ್ಲಿ’ ಸಂಪರ್ಕಗಳನ್ನು ಬಡವರು ಮತ್ತು ಸಂಕಷ್ಟದಲ್ಲಿರುವ ವರ್ಗಗಳಿಗೂ ಸಹ ನೀಡಲಾಗುವುದು.
ಪ್ರಸ್ತುತ ವೈಯಕ್ತಿಕ ಮನೆ ‘ನಲ್ಲಿ’ ಸಂಪರ್ಕವನ್ನು ಹೊಂದಿರದ (ವಿಶೇಷವಾಗಿ ಬಡವರು) ಕುಟುಂಬಗಳು ಕಡಿಮೆ ಪ್ರಮಾಣದ ನೀರನ್ನು ಪಡೆಯುತ್ತಿದ್ದಾರೆ. ಇವರು ನೀರು ಸಂಗ್ರಹಿಸಲು ಹೆಚ್ಚಿನ ಸಮಯವನ್ನು ಪೋಲು ಮಾಡುತ್ತಿದ್ದಾರೆ. ಖಾಸಗಿ ಮೂಲಗಳಿಂದ ಕಡಿಮೆ ಗುಣಮಟ್ಟದ ನೀರನ್ನು ಹೆಚ್ಚಿನ ಹಣ ಪಾವತಿಸಿ ಖರೀದಿಸುತ್ತಿದ್ದಾರೆ. ನೀರಿನ ಸಂಗ್ರಹಣಾ ವೆಚ್ಚವು ಸಹ ಇದರಿಂದ ಹೆಚ್ಚಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು 24ಘಿ7 ನೀರು ಸರಬರಾಜು ವ್ಯವಸ್ಥೆಯನ್ನು ಹೊಂದುವುದರಿಂದ ಮಾತ್ರ ಸಾಧ್ಯ. ಬಡಕುಟುಂಬಗಳಿಗೆ ನೀರಿನ ಶುಲ್ಕವನ್ನು ಬಳಸಿದ ಪ್ರಮಾಣಕ್ಕನುಗುಣವಾಗಿ (ಬಳಕೆ ಆಧಾರಿತ ಮತ್ತು ಉಳಿತಾಯವಾದ ಸಮಯವನ್ನು ಉತ್ಪಾದನಾ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ) ವಿಧಿಸಲಾಗುವುದು.
ಹೌದು. ಎಲ್ಲಾ ‘ನಲ್ಲಿ’ ಸಂಪರ್ಕಗಳಿಗೂ ಮೀಟರ್ ಅಳವಡಿಸಲಾಗುವುದು. ಮೀಟರ್ ಗುಣಾಂಕದ ಆಧಾರದಲ್ಲಿ ಬಿಲ್ಲನ್ನು ತಯಾರಿಸಲಾಗುವುದು.
ಅಕ್ರಮ ‘ನಲ್ಲಿ’ ಸಂಪರ್ಕಗಳನ್ನು ಅಧಿಕೃತಗೊಳಿಸಿಕೊಳ್ಳಲು, ನಾಗರೀಕರಿಗೆ ಒಂದು ಅವಕಾಶವನ್ನು ಕಲ್ಪಿಸಲಾಗುವುದು. ಇಂತಹ ಸಂಪರ್ಕಗಳಿಗೆ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಿದಂತಹ ಸಂಪರ್ಕಗಳನ್ನು ಮಹಾನಗರ ಪಾಲಿಕೆಯು ಸಕ್ರಮಗೊಳಿಸುವುದು.
ನೀರಿನ ದರಗಳು ನೀರಿನ ಬಳಕೆಯ ಪ್ರಮಾಣಕ್ಕನುಸಾರವಾಗಿದ್ದು, ಬಳಕೆದಾರರು ಬಳಸಿದ ನೀರಿನ ಪ್ರಮಾಣಕ್ಕನುಗುಣವಾಗಿ ಶುಲ್ಕವನ್ನು ವಿಧಿಸಲಾಗುತ್ತದೆ. ವಿವಿಧ ವರ್ಗಗಳ ಬಳಕೆದಾರರು ಪಾವತಿಸುವ ಶಕ್ತತೆಯನ್ನು ಗಮನದಲ್ಲಿರಿಸಿಕೊಂಡು ದರಗಳನ್ನು ವಿನ್ಯಾಗೊಳಿಸಲಾಗಿದೆ.
ಟೋಫೋಗ್ರಾಪಿಕ್ ಸಮೀಕ್ಷೆ ಮತ್ತು ವ್ಯವಸ್ಥೆಗಳ ಸ್ಥಿತಿಗತಿಗಳ ನಿರ್ವಹಣಾ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ. ಸಗಟು ನೀರು ಸರಬರಾಜು ಮತ್ತು ವಿತರಣಾ ವ್ಯವಸ್ಥೆಗೆ ವಿನ್ಯಾಸ ಮತ್ತು ನೀಲಿ ನಕ್ಷೆಯನ್ನು ತಯಾರಿಸಲಾಗುವುದು.
ಈ ಯೋಜನೆಯನ್ನು 2 ಹಂತಗಳಲ್ಲಿ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ. ಮೊದಲನೇ ಹಂತವನ್ನು 2026 ರ ವರೆಗೆ ಹೆಚ್ಚಳವಾಗುವ ಜನಸಂಖ್ಯೆಗೆ ಅನುಗುಣವಾಗಿ ಯೋಜಿಸಲಾಗಿದೆ. ಎರಡನೇ ಹಂತದ ಯೋಜನೆಯನ್ನು 2041 ರವರೆಗೆ ಬೆಳವಣಿಗೆಯಾಗುವ ಜನಸಂಖ್ಯೆಗೆ ಅನುಗುಣವಾಗಿ ಯೋಜಿಸಲಾಗುವುದು.
ಯೋಜನೆಯ ಮೊದಲನೇ ಹಂತದ ಅನುಷ್ಠಾನಕ್ಕೆ ಅಗತ್ಯವಿರುವ ಯೋಜನಾ ಪೂರ್ವ ತಯಾರಿ ಚಟುವಟಿಕೆಗಳು ಪ್ರಗತಿಯಲ್ಲಿವೆ. ಪೂರ್ವ ತಯಾರಿ ಚಟುವಟಿಕೆಗಳ ಭಾಗವಾಗಿ, (ಅ) ಪರಿಸರ ವಲಯದ ಸಾಮಾಜಿಕ ಮೌಲ್ಯಮಾಪನ ಮತ್ತು (ಆ) ಸಂವಹನ ಮತ್ತು ಭಾಗೀದಾರರ ಮಧ್ಯಸ್ಥಿಕೆಯ ಕಾರ್ಯತಂತ್ರದ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ, ಆಪರೇಟರ್ ನೇಮಕವಾಗಿದ್ದು, ಟೋಫೋಗ್ರಾಫಿಕ್ ಸಮೀಕ್ಷೆ, ಬಳಕೆದಾರರ ಸಮೀಕ್ಷೆ ಮತ್ತು ಆಸ್ತಿಗಳ ಸ್ಥಿತಿಗತಿಗಳ ನಿರ್ವಹಣೆಯು ಪ್ರಗತಿಯಲ್ಲಿದೆ.
ನಿರಂತರ ನೀರು ಸರಬರಾಜಿನ ಉನ್ನತೀಕರಣವು ಅಲ್ಪಾವಧಿಗಲ್ಲ. 2041 ರವರೆಗೆ ಬೆಳವಣಿಗೆಯಾಗುವ ಜನಸಂಖ್ಯೆಯನ್ನು ಆಧರಿಸಿ ಯೋಜನೆಯನ್ನು ಯೋಜಿಸಲಾಗಿದೆ.
  • ಸಾರ್ವಜನಿಕರಿಗೆ ವಿತರಿಸಲು ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.
  • ನೀರಿನ ಸಂಗ್ರಹಕ್ಕೆ ಸಮಯವನ್ನು ವ್ಯಯಿಸಿ ಕಾಯುವ ಅವಶ್ಯಕತೆಯಿರುವುದಿಲ್ಲ. ಈ ಉಳಿತಾಯದ ಸಮಯವನ್ನು ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.
  • ನೀರಿನ ಗುಣಮಟ್ಟದಲ್ಲಿ ಸುಧಾರಣೆಯಾಗಲಿರುವುದರಿಂದ, ನಾಗರೀಕರÀ ಆರೋಗ್ಯದಲ್ಲೂ ಸುಧಾರಣೆಯಾಗಿ ನೀರಿಗೆ ಸಂಬಂಧಿಸಿದ ಖಾಯಿಲೆಗಳು ಇಳಿಮುಖವಾಗಲಿವೆ.
  • ಬಳಕೆದಾರರು ನೀರನ್ನು ಶೇಖರಿಸುವ ಅಗತ್ಯವಿರುವುದಿಲ್ಲ ಮತ್ತು ಟ್ಯಾಂಕಿಗೆ ಪಂಪ್ ಮಾಡುವ ಅಗತ್ಯವೂ ಸಹ ಉದ್ಭವಿಸುವುದಿಲ್ಲ. ಆದ್ದರಿಂದ, ನೀರಿನ ಶೇಖರಣೆ, ಪಂಪಿಂಗ್ ಮತ್ತು ನಿರ್ವಹಣಾ ವೆಚ್ಚಗಳು ಇರುವುದಿಲ್ಲವಾದ್ದರಿಂದ, ಬಳಕೆದಾರರಿಗೆ ಸಂಗ್ರಹಣಾ ತೊಟ್ಟಿಯ ನಿರ್ಮಾಣ ಮತ್ತು ವಿದ್ಯುತ್ ದರಗಳಿಂದ ಉಳಿತಾಯವಾಗಲಿದೆ.

Pre Draft bid