ಏಷ್ಯನ್ ಅಭಿವೃದ್ದಿ ಬ್ಯಾಂಕ್ ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ (ಎನ್‌ಕೆಯುಎಸ್‌ಐಪಿ)

ಏಷ್ಯನ್ ಅಭಿವೃದ್ದಿ ಬ್ಯಾಂಕ್ ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ (ಎನ್‌ಕೆಯುಎಸ್‌ಐಪಿ)

ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ

ಯೋಜನಾ ಉದ್ದೆÃಶ

ಸಾಂಪ್ರದಾಯಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಹಾಗೂ ಪ್ರ‍್ರಾದೇಶಿಕ ಅಸಮತೋಲನ ನಿವಾರಣೋಪಾಯಗಳಿಗಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಯ ವರದಿ ಫಲಿತಾಂಶದ ಆಧಾರದ ಮೇಲೆ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮವು ರೂಪಿತಗೊಂಡಿತು.

ಉದ್ದೆÃಶಗಳು :
 • ಉತ್ತರ ಕರ್ನಾಟಕದ ನಗರ / ಪಟ್ಟಣಗಳ ಪರಿಸರ ಪರಿಸ್ಥಿತಿಯನ್ನು ಸುಧಾರಿಸುವುದು.
 • ಬಡತನವನ್ನು ನಿವಾರಿಸಲು, ಕಡಿಮೆ ಆಧಾಯ ಹೊಂದಿರುವ ಜನರು ವಾಸಿಸುವ ಪ್ರದೇಶಗಳಿಗೆ ಮೂಲಭೂತ ಸೇವೆಗಳನ್ನು ಒದಗಿಸುವುದು.
 • ಸಮರ್ಥನೀಯತೆ ತತ್ವದ ಆಧಾರದ ಮೇಲೆ ಯೋಜನೆಯನ್ನು ಕೈಗೊಳ್ಳಲು ಉದ್ದೆÃಶಿಸಲಾಗಿದ್ದು, ಸಾಂಸ್ಥಿಕ ಅಭಿವೃದ್ಧಿಯ ಮೂಲಕ ಉತ್ತರ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ಸೇವೆ ಸಾಮರ್ಥ್ಯಗಳನ್ನು ಸುಧಾರಿಸುವುದು.

ಯೋಜನೆ ವ್ಯಾಪ್ತಿ

ಎನ್‌ಕೆಯುಎಸ್‌ಐಪಿಯು ೧೦೪೪ ಚದರ ಕಿ.ಮೀ ವ್ಯಾಪ್ತಿಯುಳ್ಳ ೨೫ ಯೋಜನಾ ನಗರಗಳನ್ನು ಒಳಗೊಂಡಿದ್ದು, ಅಂದಾಜು ೫.೦ ದಶಲಕ್ಷ ನಗರವಾಸಿಗಳಿಗೆ ಪ್ರಯೋಜನಕಾರಿಯಾಗಲಿದೆ.

ಕಾರ್ಯಕ್ರಮದ ನಗರ ಸ್ಥಳೀಯ ಸಂಸ್ಥೆಗಳು
 • ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲ್ಬುರ್ಗಿ, ಬಳ್ಳಾರಿ, ವಿಜಯಪುರ ಮತ್ತು ದಾವಣಗೆರೆ ಮಹಾನಗರ ಪಾಲಿಕೆಗಳು
 • ಬೀದರ್, ರಾಯಚೂರು, ಗಂಗಾವತಿ, ಗದಗ-ಬೆಟಗೇರಿ, ಹಾವೇರಿ, ಹೊಸಪೇಟೆ, ಚಾಮರಾಜನಗರ, ಗೋಕಾಕ್, ಕೊಪ್ಪಳ, ರಾಣಿಬೆನ್ನೂರು, ರಬಕವಿ-ಬನಹಟ್ಟಿ, ನಿಪ್ಪಾಣಿ, ಯಾದಗಿರಿ, ಬಸವಕಲ್ಯಾಣ, ಜಮಖಂಡಿ, ಸಿಂಧನೂರು, ಇಳಕಲ್ ಮತ್ತು ಶಹಾಬಾದ್ ನಗರ ಸಭೆಗಳು.
 • ಬಾದಾಮಿ ಪುರಸಭೆ

ಯೋಜನಾ ಅಂಶಗಳು

ಭಾಗ-ಅ

ಪರಿಸರ ನೈರ್ಮಲ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯ – ಒಳಚರಂಡಿ ಮತ್ತು ಮಳೆನೀರು ಚರಂಡಿ ಒಳಗೊಂಡಿದೆ.

ಭಾಗ-ಆ

ಕುಡಿಯುವ ನೀರಿನ ವ್ಯವಸ್ಧೆ ಕಲ್ಪಿಸುವ ಮೂಲಸೌಕರ್ಯ - ಸಗಟು ನೀರು ಸರಬರಾಜುನಿಂದ ಹಿಡಿದು ಗ್ರಾಹಕರಿಗೆ ೨೪x೭ ನೀರು ಸರಬರಾಜು ಒದಗಿಸುವ ಸೌಲಭ್ಯಗಳು.

ಭಾಗ-ಇ

ನಗರ ರಸ್ತೆಗಳು – ರಸ್ತೆ ಮತ್ತು ರಸ್ತೆಬದಿ ಚರಂಡಿ ಸುಧಾರಣೆ.

ಭಾಗ-ಈ

ಬಡತನ ನಿವಾರಣೆ - ಕೊಳಚೆ ಪ್ರದೇಶ ಅಭಿವೃದ್ಧಿ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು.

ಭಾಗ-ಉ

ಪುರಸಭೆಯೇತರ ಮೂಲಸೌಕರ್ಯಗಳಾದ ಆಗ್ನಿಶಾಮಕಸೇವೆ, ಪ್ರವಾಸೋದ್ಯಮ ಅಭಿವೃದ್ಧಿ, ಕೆರೆ ಅಭಿವೃದ್ಧಿ ಮತ್ತು ವಾರ್ತಾ ಭವನ ನಿರ್ಮಾಣ.

ಭಾಗ-ಊ

ಸಾಂಸ್ಥಿಕ ಅಭಿವೃದ್ಧಿ - ನಗರ ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯಾಭಿವೃದ್ಧಿ ಮತ್ತು ನಗರ ನಕ್ಷೆಗಳ ತಯಾರಿಕೆ.

ಯೋಜನಾ ಹಣಕಾಸು

ಈ ಯೋಜನೆಗೆ ಏಷ್ಯಿನ್ ಅಭಿವೃದ್ದಿ ಬ್ಯಾಂಕ್‌ನಿಂದ ಸೆಕ್ಟರ್ ಸಾಲದ ಆದಾರದ ಮೇಲೆ ಹಣಕಾಸು ನೆರವು ನೀಡುತ್ತಿದೆ. ಎಡಿಬಿ ಯಿಂದ ಬರುವ ಹಣಕಾಸಿನ ಸಾಲವು ಬಹು ಟ್ರಾö್ಯಂಚ್ ನದ್ದಾಗಿದ್ದು, ಬದ್ದತೆ ಶುಲ್ಕವನ್ನು ಕಡಿಮೆಗೊಳಸುವ ಜೊತೆಗೆ ಸರ್ಕಾರಕ್ಕೆ ದೀರ್ಘಾವಧಿ ಬೆಂಬಲ ಒದಗಿಸುವುದು ಹಾಗೂ ಹೊಂದಾಣಿಕೆ ಮಾಡುವ ದೃಷ್ಟಿಕೋನಕ್ಕೆ ನೆರವಾಗಲಿದೆ. ನಾಲ್ಕು ಟ್ರಾö್ಯಂಚ್ ಸಾಲದ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಸಾಲದ ಅವಧಿ ಪೂರ್ಣಗೊಂಡಿದೆ.

Project Cost
Project-US ($ Mn)
ಯು.ಎಸ್. ಮಿಲಿಯನ್
ರೂ. ಕೋಟಿಗಳಲ್ಲಿ*
ಏಷ್ಯಿನ್ ಅಭಿವೃದ್ದಿ ಬ್ಯಾಂಕ್ 270.00 1,215.00
ಕರ್ನಾಟಕ ಸರ್ಕಾರ ಮತ್ತು ಅನುಷ್ಠಾನಗೊಳುಸುತ್ತಿರುವ ಸಂಸ್ಥೆಗಳು 170.00 765.00
ಒಟ್ಟು 440.00 1980.00

* ಡಾಲರ್ ವಿನಿಮಯ ದರವೂ ಯೋಜನೆ ರೂಪಿಸುವ ಸಮಯದಲ್ಲಿ ರೂ.೪೫/- ಗಳಾಗಿದ್ದು, ಮೇಲಿನ ಕೋಷ್ಠಕದಲ್ಲಿ ಇದೆ ದರವನ್ನು ಅಳವಡಿಸಿಕೊಳ್ಳಲಾಗಿದೆ. ವಾಸ್ತವಿಕವಾಗಿ ರೂ.ಕೋಟಿಗಳಲ್ಲಿ ನೀಡಿರುವ ಮೊತ್ತವು ಬದಲಾಗಲಿದೆ.

ಸಾಲ ಮತ್ತು ಅನುದಾನಗಳು

ಕರ್ನಾಟಕ ಸರ್ಕಾರವು ಸ್ಧಳೀಯ ಸಂಸ್ಧೆಗಳಿಗೆ ಸಾಲ ಮತ್ತು ಅನುದಾನದ ರೂಪದಲ್ಲಿ ಕೆಳಕಂಡಂತೆ ಶೇಕಡಾ ನೆರವನ್ನು ನೀಡುತ್ತಿದೆ.

Financing Pattern
Infrastructure Type
Loan(%)
Grant(%)*
Implementing Agency Contribution(%)
Interest Rate(%)
Environmental Sanitation - 90 10 -
Water Supply 40 50 10 8.5
Urban Roads - 90 10 -
Slum Improvement - 90 10 -
Non-Muncipal Infrastructure - 90 10 -
ಕಾರ್ಯಾಧಾರಿತ ಪ್ರಮಾಣ ನೀಡಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಉತ್ತೆÃಜನ ನೀಡುವ ಸಲುವಾಗಿ ಬಡ್ಡಿದರದಲ್ಲಿ ಕೆಳಗಿನಂತೆ ಕಡಿತ ನೀಡಲಾಗುವುದು.
 • ಕರ್ನಾಟಕ ಪೌರ ಕಾಯ್ದೆ ೧೯೬೪ರ ತಿದ್ದುಪಡಿ ಅನುಸಾರ ಶೇ. ೭೫ರಷ್ಟು ಆಸ್ತಿ ತೆರಿಗೆ ಅನುಷ್ಠಾನ - 1 %
 • ಎಫ್‌ಬಿಎಎಸ್ ಮತ್ತು ಗಣಕೀಕರಣ - 1 %
 • ಪರಿಷ್ಕೃತ ನೀರಿನ ದರ ಅನುಷ್ಠಾನ - 1 %

ಸುಸ್ತಿ ಮೇಲಿನ ಬಡ್ಡಿದರವನ್ನು ವಾರ್ಷಿಕ ಶೇ.೧೧ ಎಂದು ಪರಿಗಣಿಸಲಾಗುವುದು.

Component-wise allocation of funds

ಅನುಷ್ಠಾನ ವ್ಯವಸ್ಥೆ

ಕೆಯುಐಡಿಎಫ್‌ಸಿಯು ಎನ್‌ಕೆಯುಎಸ್‌ಐಪಿ ಯೋಜನೆಗೆ ಕಾರ್ಯನಿರ್ವಹಣಾ ಸಂಸ್ಥೆಯಾಗಿದೆ. ಕೆಯುಐಡಿಎಫ್‌ಸಿಯು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾದೇಶಿಕ ಕಛೇರಿಯನ್ನು ಹುಬ್ಬಳ್ಳಿಯಲ್ಲಿ ಹಾಗೂ ನಾಲ್ಕು ವಿಭಾಗೀಯ ಕಛೇರಿಗಳನ್ನು ಕೆಳಕಂಡ ನಗರಗಳಲ್ಲಿ ಸ್ಥಾಪಿಸಿದೆ:

ಹುಬ್ಬಳ್ಳಿ ವಿಭಾಗ

ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಗದಗ-ಬೆಟಗೇರಿ, ರಾಣೆಬೆನ್ನೂರು, ಹಾವೇರಿ ಮತ್ತು ವಿಜಯಪುರ ಪಟ್ಟಣಗಳನ್ನು ಒಳಗೊಂಡಿದೆ

ಬೆಳಗಾವಿ ವಿಭಾಗ

ಬೆಳಗಾವಿ, ರಬಕವಿ-ಬನಹಟ್ಟಿ, ಗೋಕಾಕ್, ಜಮಖಂಡಿ, ಬಾದಾಮಿ, ನಿಪ್ಪಾಣಿ ಮತ್ತು ಇಳಕಲ್ ಪಟ್ಟಣಗಳನ್ನು ಒಳಗೊಂಡಿದೆ

ಕಲ್ಬುರ್ಗಿ ವಿಭಾಗ

ಕಲ್ಬುರ್ಗಿ, ಬೀದರ್, ಯಾದಗಿರ್, ಬಸವಕಲ್ಯಾಣ ಮತ್ತು ಶಹಬಾದ ಪಟ್ಟಣಗಳನ್ನು ಒಳಗೊಂಡಿದೆ.

ಬಳ್ಳಾರಿ ವಿಭಾಗ

ರಾಯಚೂರು, ಬಳ್ಳಾರಿ, ಹೊಸಪೇಟೆ, ಗಂಗಾವತಿ, ಕೊಪ್ಪಳ, ಸಿಂಧನೂರು ಮತ್ತು ಚಾಮರಾಜನಗರ ಪಟ್ಟಣಗಳನ್ನು ಒಳಗೊಂಡಿದೆ

ವಿಕೇಂದ್ರಿÃಕರಣ ದೃಷ್ಟಿಕೋನದಿಂದ, ಎಲ್ಲಾ ಪ್ರಮುಖ ಉಪಯೋಜನೆಗಳನ್ನು ಕಾರ್ಯಕ್ರಮ ನಗರ ಸ್ಥಳೀಯ ಸಂಸ್ಥೆಗಳು, ಇತರ ಇಲಾಖೆಗಳು ಅಥವಾ ರಾಜ್ಯಮಟ್ಟದ ಇಲಾಖೆಗಳ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ.

ನೀರು ಸರಬರಾಜು, ಒಳಚರಂಡಿ, ಮಳೆನೀರು ಚರಂಡಿ ಮತ್ತು ರಸ್ತೆಗಳು, ಮುಂತಾದ ಪುರಸಭೆ ಕಾಮಗಾರಿಗಳನ್ನು ನಗರಸ್ಥಳೀಯ ಸಂಸ್ಥೆಗಳು ಅನುಷ್ಠಾನ ಗೊಳಿಸುತ್ತಿವೆ. ಉಳಿದ ಅಂಶಗಳನ್ನು ಸಂಬಂಧಪಟ್ಟ ಇಲಾಖೆಗಳಾದ ಕರ್ನಾಟಕ ಕೊಳಚೆ ಭಿವೃದ್ಧಿ ಮಂಡಳಿ, ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತುಸೇವೆಗಳು, ಮುಂತಾದ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅನುಷ್ಠಾನ ಸಂಸ್ಥೆಗಳು ಟೆಂಡರ್ ಪ್ರಕಟಣೆ ಹೊರಡಿಸುವುದು, ಗುತ್ತಿಗೆ ವಹಿಸುವಿಕೆ, ಅನುಷ್ಠಾನ ಹಾಗೂ ಪ್ರತಿದಿನದ ಮೇಲ್ವಿಚಾರಣೆ ಮುಂತಾದವುಗಳಿಗೆ ಜವಾಬ್ದಾರರಾಗಿವೆ. ಎಲ್ಲಾ ಕಾರ್ಯಕ್ರಮ ಪಟ್ಟಣಗಳಲ್ಲಿ ಎನ್‌ಕೆಯುಎಸ್‌ಐಪಿ ಕೋಶಗಳನ್ನು ಸ್ಥಾಪಿಸಿದ್ದು, ಯೋಜನೆಯ ಅನುಷ್ಠಾನದಲ್ಲಿ ನೆರವಾಗಲಿದೆ.

ಅನುಷ್ಠಾನದ ಅವಧಿಯಲ್ಲಿ ಸಮಾಲೋಚಕರು ಕಾರ್ಯಕ್ರಮ ಮೇಲ್ವಿಚಾರಣ ಘಟಕಕ್ಕೆ÷ಯೋಜನಾ ಕಾರ್ಯಾ ಅನುಷ್ಠಾನ ಸಲುವಾಗಿ ವಿಭಾಗೀಯ ಕಚೇರಿ ಹಾಗೂ ಅನುಷ್ಠಾನ ಸಂಸ್ಥೆಗಳ ಮುಖಾಂತರ ಅಗತ್ಯ ನೆರವು ನೀಡುತ್ತಿದ್ದಾರೆ.

ಅಧಿಕಾರಯುಕ್ತ ಸಮಿತಿ

ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಅಧಿಕಾರಯುಕ್ತ ಸಮಿತಿಯನ್ನು ಈ ಯೋಜನೆಗಾಗಿ ರಚಿಸಲಾಗಿದೆ. ಈ ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ), ಕೆಯುಐಡಿಎಫ್‌ಸಿ ಯ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಈ ಅಧಿಕಾರಯುಕ್ತ ಸಮಿತಿಯು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿದೆ.

ಜಿಲ್ಲಾ ಮಟ್ಟದ ಯೋಜನಾ ಚಾಲನಾ ಸಮಿತಿ

ಈ ಕಾರ್ಯಕ್ರಮವು ಕರ್ನಾಟಕದ ೧೪ ಜಿಲ್ಲೆಗಳನ್ನು ವ್ಯಾಪಿಸಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮತ್ತು ಅಗತ್ಯ ಸಹಕಾರ ನೀಡಲು, ಕರ್ನಾಟಕ ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಯೋಜನಾ ಚಾಲನಾ ಸಮಿತಿಗಳನ್ನು ರಚಿಸಿದೆ. ಈ ಸಮಿತಿಯಲ್ಲಿ ಕೆಯುಐಡಿಎಫ್‌ಸಿಯ ಸಂಬಂಧಿಸಿದ ವಿಭಾಗಿಯ ಕಛೇರಿಯ ಉಪ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಯೋಜನಾ ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು / ಮುಖ್ಯಾಧಿಕಾರಿ, ಯೋಜನಾ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಈ ಸಮಿತಿಯು ಯೋಜನೆ ಅನುಷ್ಠಾನದ ಪ್ರಗತಿಯನ್ನು ಪರಿಶೀಲನೆ ನಡೆಸಲಿದ್ದು, ಇದಲ್ಲದೆ ಇತರೆ ಇಲಖೆಗಳಿಂದ ದೊರೆಯಬೇಕಾದ ಅನುಮತಿ ಪಡೆಯುವಲ್ಲಿ ಸಹಕಾರ ನೀಡಲಿದೆ.

ತಾಂತ್ರಿಕ ಸಮಿತಿ

ಬಾಹ್ಯ ತಜ್ಞರು ಒಳಗೊಂಡ ಒಂದು ತಾಂತ್ರಿಕ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಹೊಸ ತಾಂತ್ರಿಕತೆ, ಹೊಸ ಸಾಮಗ್ರಿಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಅನುಮೋದನೆ ನೀಡುತ್ತದೆ ಹಾಗೂ ಯೋಜನೆ ಅನುಷ್ಠಾನದಲ್ಲಿ ಕಂಡುಬರುವ ತಾಂತ್ರಿಕ ಅಂಶಗಳನ್ನು ಪರಿಶೀಲನೆ ನಡೆಸುತ್ತದೆ.

ಪ್ರಸ್ತುತ ಸ್ಥಿತಿ

North Karnataka Urban Sector Investment Programme
ABSTRACT - TOWNWISE STATUS
Sl. No ULB No. of Contracts Value of contracts - revised (in Rs. Cr) Financial Progress (in Rs. Cr) No of Completed contracts
1 Hubballi-Dharwad 7 163.04 158.88 4
2 Davangere 3 90.93 64.98 1
3 Gadag-Betageri 3 200.98 143.11 0
4 Haveri 5 92.14 40.86 2
5 Ranebennur 4 95.96 54.77
6 Vijayapura 4 134.38 40.94
7 Belgavi
8 Gokak 4 53.22 42.89 1
9 Nippani 3 39.626 24.18
10 Jamakandi 4 20.89 20.27 4
11 Rabakavi-Banhatti 2 43.55 6.29 0
12 Ilkal 4 74.68 44.57 2
13 Badami 3 9.32 8.42 3
14 Kalaburagi 5 81.19 54.21 3
15 Yadgir 5 53.89 22.37 3
16 Shahabad 2 39.4 32.57 1
17 Bidar 8 169.35 111.82 4
18 Basavakalyan 4 97.24 61.4 3
19 Bellari 8 202.19 138.9 4
20 Hosapete 4 118.18 75.95 1
21 Koppal 2 40.27 23.62 1
22 Gangavathi 4 14.25 13.86 4
23 Raichur 5 187.36 83.93 1
24 Sindhanur 3 138.14 49.09 1
25 Chamarajangar 6 50.56 35.01 2
F & ES equipments 12 22.73 22.73 12
SUID works 3 3.67 3.67 3
Mapping 3 5.3 5.30 3
Nagarabivruddi Bhavan 11 26.12 25.41 11
Total 130 2266.32 1404.00 76
Note: Wherever slum and F & ES packages have more than one town, the status of the same is indicated in one the town

ಸುಧಾರಣೆ

ಈ ಕಾರ್ಯಕ್ರಮದಡಿ ಕೆಳಕಂಡ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ:
 • ನಗರ ಸ್ಥಳೀಯ ಸಂಸ್ಥೆಗಳು ಉತ್ತಮ ಸೇವೆ ಒದಗಿಸುವ ಸಲುವಾಗಿ ಬಳಕೆ ಆಧಾರಿತ ನೀರಿನ ದರವನ್ನು ಅನುಷ್ಠಾನಗೊಳಿಸುವುದು ಮತ್ತು ಒಳಚರಂಡಿ ನಿರ್ವಹಣೆ ದರವನ್ನು ಅಳವಡಿಸುವುದು.
 • ಈ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಮೂಲಸೌಕರ್ಯ ವ್ಯವಸ್ಥೆಗಳ ಉತ್ತಮ ನಿರ್ವಹಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ನೆರವು ನೀಡಲು ಒ ಮತ್ತು ಎಮ್ (ಔ&ಒ) ಕೋಶವು ಕಾರ್ಯಪ್ರವೃತ್ತವಾಗಿದೆ.
 • ಆಸ್ತಿತೆರಿಗೆ, ಉದ್ದಿಮೆ ಪರವಾನಗಿ ಶುಲ್ಕ, ಜಾಹಿರಾತು ಶುಲ್ಕ ವಸುಲಾತಿಯನ್ನು ಹೆಚ್ಚಿಸುವುದು.
 • ಲೆಕ್ಕ ಪತ್ರಗಳ ಸುಧಾರಣೆಯನ್ನು ಜಾರಿಗೊಳಿಸುವುದು.
 • ಸ್ಥಳೀಯ ಸಂಸ್ಥೆಗಳ ಚಟುವಟಿಕೆಗಳ ಗಣಕೀಕರಣ ಕೈಗೊಳ್ಳುವುದು.
 • ಸಾಂಸ್ಥಿಕ ಸಾಮರ್ಥ್ಯ ಹೆಚ್ಚಿಸುವುದು