PROJECT-Trust

Trust

ಕರ್ನಾಟಕ ನೀರು ನೈರ್ಮಲೀಕರಣ ಕ್ರೋಢೀಕೃತ ನಿಧಿ:

ಕರ್ನಾಟಕ ನೀರು ನೈರ್ಮಲೀಕರಣ ಕ್ರೋಢೀಕೃತ ನಿಧಿ(ಕೆಡಬ್ಲೂಎಸ್‍ಪಿಎಫ್) ಯನ್ನು ಭಾರತೀಯ ಟ್ರಸ್ಟ್ ಕಾಯ್ದೆ 1882 ಅಡಿಯಲ್ಲಿ ದಿ: 12ನೇ ಸೆಪ್ಟಂಬರ್ 2003 ದತ್ತಿ ಒಪ್ಪಂದ (ಖಿಡಿusಣ ಆeeಜ) ರಂದು ರೂಪಿಸಲಾಗಿದೆ. ಕೆಯುಐಡಿಎಫ್‍ಸಿ ಯು ಟ್ರಸ್ಟ್ ಗೆ ನಿಧಿ ವ್ಯವಸ್ಥಾಪಕರಾಗಿರುತ್ತಾರೆ. ಈ ದತ್ತಿಯು ರಾಜ್ಯ ಮಟ್ಟದ ಕ್ರೋಢೀಕೃತ ನಿಧಿಯ ಅಸ್ತಿತ್ವವನ್ನು ಹೊಂದಿದ್ದು, ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿದೆ.

ನಿಧಿಯ ಮುಖ್ಯ ಉದ್ದೇಶಗಳು:

1.ನಗರ ಮೂಲಸೌಕರ್ಯ ಯೋಜನೆಗಳಿಗೆ ಕ್ರೋಢೀಕೃತ ಹಣಕಾಸು ಯೋಜನೆಯಡಿ ಸಂಪನ್ಮೂಲಗಳನ್ನು ರೂಪಿಸಿ, ಕಡಿಮೆ ವೆಚ್ಚದಲ್ಲಿ ಹಣವನ್ನು ಪಡೆದು ಹಣಕಾಸು ರಚನೆಯನ್ನು ಸ್ಥಾಪಿಸುವುದು

2.ಮೂಲಸೌಕರ್ಯ ಯೋಜನೆಗಳನ್ನು ಕ್ರೋಢೀಕೃತ ಹಣಕಾಸು ವೆಚ್ಚದಡಿಯಲ್ಲಿ ಅನುಷ್ಟಾನಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಮಾರುಕಟ್ಟೆ ಅಸ್ತಿತ್ವವನ್ನು ಸಕ್ರಿಯಗೊಳಿಸುವುದು

3.ಯಾವುದೇ ಒಪ್ಪಂದದ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುವುದು ಅಥವಾ ಯಾವುದೇ ಬಾಂಡ್ ಸಂಚಿಕೆ ಪಾವತಿ ಮತ್ತು ಕ್ರೋಢೀಕೃತ ಹಣಕಾಸು ರಚನೆಯಡಿ ಸಂಪನ್ಮೂಲಗಳನ್ನು ರೂಪಿಸುವುದು

4.ಟ್ರಸ್ಟ್ ಉದ್ದೇಶಗಳನ್ನು ಪೂರೈಸಲು ಟ್ರಸ್ಟ್‍ಗೆ ಸಂಬಂಧಿಸಿದ ಹಣವನ್ನು ಯೋಗ್ಯವಾಗಿ ಮತ್ತು ಸಮರ್ಪಕವಾಗಿ ಹೂಡಿಕೆ ಮಾಡುವುದು

5.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರವಾಗಿ ನೋಡಲ್ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದು

ಟ್ರಸ್ಟ್ ಅಡಿಯಲ್ಲಿ ಕೈಗೊಂಡಿರುವ ಪ್ರಮುಖ ಕಾರ್ಯಗಳು:

1.ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯ ಮುಖಾಂತರ ಜಿಬಿಡಬ್ಲೂಎಎಸ್‍ಪಿ ಕಾರ್ಯಕ್ರಮದಡಿಯಲ್ಲಿ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ನೀಡಲು ರೂ. 100.00 ಕೋಟಿ ಮೊತ್ತದ ತೆರಿಗೆ ಮುಕ್ತ ಬಾಂಡುಗಳನ್ನು ಕಲ್ಪಿಸಲಾಗಿದೆ

2.ರಾಜ್ಯ ಸರ್ಕಾರಕ್ಕೆ ಕೆಳಕಂಡ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಸಂಪನ್ಮೂಲಗಳನ್ನು ಕಲ್ಪಿಸಲಾಗಿದೆ

  • ಮುಖ್ಯ ಮಂತ್ರಿಯವರ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ (ಸಿಎಂಎಸ್‍ಎಂಟಿಡಿಪಿ) ಹಂತ-1 ಮತ್ತು ಹಂತ-2
  • ನಗರೋತ್ಥಾನ ಯೋಜನೆ ಹಂತ-2 ಮತ್ತು ಹಂತ-3 ರಡಿ 8 ನಗರ ಸಂಸ್ಥೆಗಳಿಗೆ ರೂ. 100 ಕೋಟಿಗಳ ಮುಖ್ಯ ಮಂತ್ರಿಯವರ ವಿಶೇಷ ಅನುದಾನ
  • ಸೆಪ್ಟಂಬರ್-2018ರ ವರೆಗೂ ಈ ಯೋಜನೆಗಳಿಗೆ ಒಟ್ಟು ರೂ. 2,300.00 ಕೋಟಿ ಸಾಲವನ್ನು ಕಲ್ಪಿಸಲಾಗಿದೆ.

ಮುಂದಿನ ಯೋಜನೆಗಳು:

1) ರೂ. 350 ಕೋಟಿ ತೆರಿಗೆ ಮುಕ್ತ ಬಾಂಡುಗಳನ್ನು ಕಲ್ಪಿಸಲು / ಬೆಳಗಾಂ, ಹುಬ್ಬಳ್ಳಿ-ಧಾರವಾಡ ಮತ್ತು ಗುಲ್ಬರ್ಗ ನಗರ ಸಂಸ್ಥೆಗಳಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಆಧುನೀಕರಣ ಯೋಜನೆ (ಕೆಯುಡಬ್ಲೂಎಸ್‍ಎಂಪಿ) ಯಡಿಯಲ್ಲಿ 24/7 ನೀರು ಸರಬರಾಜು ಯೋಜನೆಗೆ ಬ್ಯಾಂಕ್ ಸಾಲಕ್ಕಾಗಿ ಪ್ರಸ್ತಾವನೆ

2) 9 ಪಟ್ಟಣಗಳಲ್ಲಿ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕಾಗಿ ರೂ. 100 ಕೋಟಿ ಸಾಲವನ್ನು ಕ್ರೋಢಿಕರಿಸುವುದು.

ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್):

ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್):

ಕೆಯುಐಡಿಪಿ, ಕುಡ್ಸೆಂಪ್, ಜೆಎನ್‍ಎನ್‍ಯುಆರ್‍ಎಂ ಮತ್ತು ಇತರೆ ಯೋಜನೆಗಳಡಿಯಲ್ಲಿ ಹಲವು ಅನುಷ್ಟಾನ ಸಂಸ್ಥೆಗಳು ಪಡೆದಿರುವ ಸಾಲದ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಈ ನಿಧಿಯು ಹೊಂದಿರುತ್ತದೆ. (ಅಕ್ಟೊಂಬರ್-2018ರ ಅಂತ್ಯಕ್ಕೆ ನಿಧಿಯಲ್ಲಿನ ಮೊತ್ತ ರೂ. 687.07 ಕೋಟಿಗಳು). ವಾಣಿಜ್ಯ, ಅರೆ-ವಾಣಿಜ್ಯ ಮತ್ತು ಸಾಮಾಜಿಕ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವುದು ಈ ನಿಧಿಯ ಉದ್ದೇಶವಾಗಿದೆ.

ಮೂಲಸೌಕರ್ಯ ಯೋಜನೆಗಳನ್ನು ಅನುಷ್ಟಾನಗೊಳಿಸಲು ನೇಮಕಗೊಂಡಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳು ಹಣಕಾಸು ಅಗತ್ಯತೆಗಾಗಿ ಈ ಯೋಜನೆಯ ವ್ಯಾಪ್ತಿಗೊಳಪಡುತ್ತವೆ.

ಸಾಮಾನ್ಯವಾಗಿ ರೂ. 100 ಕೋಟಿ ವರೆಗಿನ ಮೊತ್ತವಿರುವ ಯೋಜನೆಗಳು ಅರ್ಹವಿರುತ್ತದೆ ಮತ್ತು ಮರುಪಾವತಿ ಅವಧಿಯು 15 ವರ್ಷಗಳಾಗಿರುತ್ತದೆ.

ಮಾರುಕಟ್ಟೆ ಸಾಲಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸ್ವತ: ಸಂಪನ್ಮೂಲಗಳಿಗೆ ಪೂರಕವಾಗಿ ಈ ನಿಧಿಯಿಂದ ಹಣಕಾಸು ಸಾಲ ನೀಡಲಾಗುವುದು.

IRR/ERR ಪ್ರಾಥಮಿಕ ಮಿತಿಗೆ - ಆರ್ಥಿಕ ಮತ್ತು ಹಣಕಾಸಿನ ಕಾರ್ಯಸಾಧ್ಯತೆ

ಮರುಪಾವತಿ ಹಾಗೂ ಸುಧಾರಣೆಗಳ ಅನುಷ್ಟಾನವನ್ನು ನಿಗದಿತವಾಗಿ ಕೈಗೊಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಬಡ್ಡಿ ರಿಯಾಯಿತಿ ಹಾಗೂ ಇತರೆ ಪ್ರೋತ್ಸಾಹಗಳನ್ನು ನೀಡುವುದು.

ಯೋಜನೆಗಳಿಗೆ ವಿಧಿಸಲಾಗುವ ಬಡ್ಡಿ ದರವು ಎಸ್‍ಬಿಐ ಎಂಎಲ್‍ಸಿಆರ್ ದರಗಳಿಗೆ ಸಂಪರ್ಕಗೊಂಡಿದ್ದು, ವಿವರಗಳು ಕೆಳಕಂಡಂತಿವೆ:

    1) ವಾಣಿಜ್ಯ - ಎಸ್‍ಬಿಐ ಎಂಎಲ್‍ಸಿಆರ್ ದರದಲ್ಲಿ ಶೇ. 2 ರಷ್ಟು ಕಡಿಮೆ 2) ಅರೆ-ವಾಣಿಜ್ಯ - ಎಸ್‍ಬಿಐ ಎಂಎಲ್‍ಸಿಆರ್ ದರದ ಶೇ. 2 ರಿಂದ 3 ರಷ್ಟು 3) ಸಾಮಾಜಿಕ - ಎಸ್‍ಬಿಐ ಎಂಎಲ್‍ಸಿಆರ್ ದರದ ಶೇ. 3 ರಿಂದ 5 ರಷ್ಟು ಕಡಿಮೆ

ಕೆಳಕಂಡ ಯೋಜನಾ ಮೌಲ್ಯಮಾಪನ ಸಾಧ್ಯತೆಯ ಪ್ರಸ್ತಾವನೆಗಳನ್ನು ನಗರ ಸ್ಥಳೀಯ ಸಂಸ್ತೆಗಳು ಸಲ್ಲಿಸಿರುತ್ತದೆ:

    ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆಗಾಗಿ ವ್ಯವಹಾರ ಸಲಹೆಗಾರರಿಂದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಂದ ಕೈಗೊಳ್ಳುವ 42 ಯೋಜನೆಗಳನ್ನು ನಿರ್ಣಯಿಸಿ ಮತ್ತು ವಿಶ್ಲೇಷಿಸಲಾಗಿದೆ.

    ಇದರಲ್ಲಿ 10 ಪ್ರಸ್ತಾವನೆಗಳು ಪೂರ್ಣಗೊಂಡಿರುತ್ತದೆ (ಒಂದು ಪಿಪಿಪಿ ಅಡಿಯಲ್ಲಿ) ಮತ್ತು (9 ಯುಐಡಿಎಫ್ ನಿಧಿಯ ನೆರವಿನಲ್ಲಿ). ಈ ಯೋಜನೆಗಳಿಗೆ ಇಪಿಸಿ ಅಡಿಯಲ್ಲಿ ಯೋಜನಾ ಮೊತ್ತ ರೂ. 159.41 ಕೋಟಿಗಳಿಗೆ ರೂ. 64.19 ಕೋಟಿ ಸಾಲ ಮಂಜೂರಾಗಿರುತ್ತದೆ.

    ಮೇಲಿನ ಅಧ್ಯಯನಗಳ ಜೊತೆಗೆ ಕೆಲವು ಯೋಜನೆಗಳು ಪ್ರಸ್ತುತ ಸಲ್ಲಿಕೆಯ ಹಂತದಲ್ಲಿದ್ದು ಮತ್ತು ನಮ್ಮ ಸಲಹೆಗಾರರು / ವ್ಯವಹಾರ ಸಲಹೆಗಾರರು / ನಗರ ಸ್ಥಳೀಯ ಸಂಸ್ಥೆಗಳಿಂದ ವರದಿಗಳನ್ನು ಸಲ್ಲಿಸಿದ ನಂತರ ಕೈಗೊಳ್ಳಲಾಗುವುದು.

    ದಿ: 31.10.2018ರಂತೆ ಒಟ್ಟು ಯುಐಡಿಎಫ್ ನಿಧಿಯ ಮೊತ್ತ ರೂ. 687.07 ಕೋಟಿಗಳು.

Progress

Reforms